Bele Parihara News:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ವರ್ಷ ಅಂದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆ ಗಿಂತ ಹೆಚ್ಚು ಮಳೆಯಾಗಿದ್ದು ನಮ್ಮ ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಕಟಾವಿಗೆ ಬಂದ ಬೆಳೆಗಳು ಹಾನಿ ಉಂಟಾಗಿದೆ. ಹಾಗಾಗಿ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಬೆಳೆ ಹಾನಿ ಆದಂತ ರೈತರಿಗೆ ಹಾಗೂ ಬೆಳೆ ನಷ್ಟ ಉಂಟಾದ ಅರ್ಹ ಫಲಾನುಭವಿ ರೈತರಿಗೆ ಬೆಳೆ ಪರಿಹಾರ ನೀಡುವುದಾಗಿ ನಮ್ಮ ಕಂದಾಯ ಇಲಾಖೆಯ ಸಚಿವ ಕೃಷ್ಣೆ ಬೈರೇಗೌಡರು ಮಾಹಿತಿ ಪ್ರಕಟಿಸಿದ್ದಾರೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ
ಸ್ನೇಹಿತರೆ ಇದೇ ರೀತಿ ತರಕಾರಿ ಯೋಜನೆಗಳು ಹಾಗೂ ರೈತರಿಗೆ ಸಂಬಂಧಿಸಿದ ಹಲವಾರು ಸಬ್ಸಿಡಿ ಯೋಜನೆಗಳು ಮತ್ತು ಬೆಳೆ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ನಮ್ಮ ರಾಜ್ಯದಲ್ಲಿ ಜಾರಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ಮಾಹಿತಿಗಳಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
15 ದಿನದಲ್ಲಿ ಬೆಳೆ ಹಾನಿ ಪರಿಹಾರ (Bele Parihara News)..?
ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಇದೆ ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆ ಇಂಥ ಹೆಚ್ಚು ಮಳೆಯಾಗಿದ್ದು ನಮ್ಮ ರಾಜ್ಯದಲ್ಲಿ ಸುಮಾರು 56,993 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿ ಅಥವಾ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ ಮತ್ತು ಇದರಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆಯಲ್ಲಿ ಈ ಒಂದು ವರದಿ ರೆಡಿ ಮಾಡಲಾಗಿದ್ದು ಇನ್ನೂ ಮೂರು ಅಥವಾ ನಾಲ್ಕು ದಿನಗಳ ಅಲ್ಲಿ ಸಂಪೂರ್ಣ ವರದಿ ಪೂರ್ಣಗೊಳ್ಳಲಿದೆ ಹಾಗಾಗಿ ಇನ್ನು 15 ದಿನಗಳ ಒಳಗಡೆಯಾಗಿ ಬೆಳೆ ನಷ್ಟ ಉಂಟಾದಂತಹ ಅರ್ಹ ರೈತರ ಖಾತೆಗೆ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ನಮ್ಮ ಕಂದಾಯ ಸಚಿವ ಕೃಷ್ಣ ಬೈರೇಗೌಡರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಮಾಹಿತಿ ಪ್ರಕಟಿಸುತ್ತಾರೆ

ಸ್ನೇಹಿತರೆ ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಳೆ ಆದರಿಂದ ನಮ್ಮ ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ ಇರುವಂತಹ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಮತ್ತು ಇತರ ಬೆಳೆಗಳು ಸೇರಿ ಸುಮಾರು 56993 ಆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ ಎಂದು ಗುರುತಿಸಲಾಗಿದೆ ಹಾಗಾಗಿ ಅರ್ಹ ರೈತರಿಗೆ ಶೀಘ್ರದಲ್ಲೇ ಬೆಳೆ ಪರಿಹಾರ ಅಥವಾ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಲಾಗುತ್ತದೆ. ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ
ಬೆಳೆ ಹಾನಿ ಪರಿಹಾರ ಪಡೆಯಲು ಏನು ಮಾಡಬೇಕು (Bele Parihara News)..?
ಸ್ನೇಹಿತರೆ ನಿಮಗೆ ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಳೆಯ ಕಾರಣದಿಂದ ಅಥವಾ ಮಳೆಯಿಂದ ನಿಮಗೆ ಈ ವರ್ಷ ಬೆಳೆಯಾನಿ ಅಥವಾ ಬೆಳೆ ನಷ್ಟ ಉಂಟಾದರೆ ನೀವು ನಿಮ್ಮ ಹತ್ತಿರದಲ್ಲಿರುವಂತ ಕೃಷಿ ಸಂಪರ್ಕ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಜಮೀನಿಗೆ ಸಂಬಂಧಿಸಿದ ಜಮೀನು ಪ್ರಮಾಣ ಪತ್ರ ಅಥವಾ RTC ಪತ್ರ ಹಾಗೂ ರೈತರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮುಂತಾದ ದಾಖಲಾತಿಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸಬಹುದು
ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಕುಲಕರಣಿ ಅಥವಾ ಗ್ರಾಮ ಲೆಕ್ಕಾಧಿಕಾರಿ (VA) ಅವರನ್ನು ಭೇಟಿ ನೀಡಿ ಬೆಳೆ ಹಾನಿ ಅಥವಾ ಬೆಳೆ ನಷ್ಟಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಸಬಹುದು
ಎಷ್ಟು ಬೆಳೆ ಪರಿಹಾರ ಸಿಗುತ್ತೆ (Bele Parihara News)..?
ಸ್ನೇಹಿತರೆ NDRF ಮಾರ್ಗಸೂಚಿಯ ಪ್ರಕಾರ ಪ್ರತಿ ಎಕರೆಗೆ ಬೆಳೆ ಹಾನಿ ಉಂಟಾದ ಪರಿಹಾರದ ಮತ್ತವು ಈ ಕೆಳಗಿನಂತೆ ನಿಗದಿ ಮಾಡಲಾಗಿದೆ
- ಮಳೆ ಆಧಾರಿತ ಬೆಳೆಗಳಿಗೆ:- ₹8,500/-
- ನೀರಾವರಿ ಬೆಳೆಗಳಿಗೆ:- ₹17,000/-
- ಬಹುವಾರ್ಷಿಕ ಬೆಳೆಗಳಿಗೆ:- ₹22,500/-
ಬೆಳೆ ಹಾನಿ ಪರಿಹಾರದ ಲಿಸ್ಟ್ ಚೆಕ್ ಮಾಡುವುದು ಹೇಗೆ (Bele Parihara News)..?
ಸ್ನೇಹಿತರೆ ನೀವು ಬೆಳೆ ಪರಿಹಾರ ಅಥವಾ ಬೆಳೆ ಹಾನಿ ಉಂಟಾದ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಲು ಬಯಸಿದರೆ ನೀವು ಮೊದಲು ಬೆಳೆ ಪರಿಹಾರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ಬೆಳೆ ಪರಿಹಾರ ಲಿಸ್ಟ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
- ಸ್ನೇಹಿತರ ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಬೆಳೆ ಪರಿಹಾರ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುತ್ತಿರಿ. ನಂತರ ಅಲ್ಲಿ ನೀವು “citizen login” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ
- ನಂತರ ನಿಮಗೆ ಅರ್ಜಿ ಸಲ್ಲಿಸಿದ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ನಂಬರ್ ನಮೂದಿಸಿ ನಿಮ್ಮ ಬೆಳೆ ಪರಿಹಾರದ ಅರ್ಜಿಯ ಸ್ಟೇಟಸ್ ಅಥವಾ ಪರಿಹಾರ ಹಣದ ಸ್ಟೇಟಸ್ ಚೆಕ್ ಮಾಡಬಹುದು
ವಿಶೇಷ ಸೂಚನೆ:- ಪ್ರಸ್ತುತ ಈ ವೆಬ್ ಸೈಟನ್ನು ಲಾಕ್ ಮಾಡಲಾಗಿದ್ದು ಬೆಳೆ ಪರಿಹಾರ ಅಥವಾ ಬೆಳೆ ಹಾನಿ ಸಂಬಂಧ ಪಟ್ಟಂತ ಸ್ಟೇಟಸ್ ಚೆಕ್ ಮಾಡಲು ನಿಮ್ಮ ಹತ್ತಿರದ ಸಂಬಂಧ ಪಟ್ಟಂತ ಅಧಿಕಾರಿಗಳಿಗೆ ಭೇಟಿ ನೀಡಿ ಅಥವಾ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ