Anna bhagya New Rules:– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ಹಣ ಪಡೆಯುತ್ತಿದ್ದೀರಾ ಹಾಗಾದರೆ ನಿಮ್ಮ ಖಾತೆಗೆ ಹಣ ಜಮಾ ಆಗಬೇಕಾದರೆ ರಾಜ್ಯ ಸರ್ಕಾರ ಕಡೆಯಿಂದ ನಿಗದಿ ಮಾಡಿರುವಂತ ಈ ರೂಲ್ಸ್ ಗಳನ್ನು ಪಾಲಿಸಬೇಕು ಅಂದರೆ ಮಾತ್ರ ನಿಮಗೆ ಇನ್ನು ಮುಂದೆ ಅನ್ನಭಾಗ್ಯ ಯೋಜನೆಯ ಹಣ ಬರುತ್ತೆ ಇಲ್ಲವಾದರೆ ಯಾವುದೇ ರೀತಿ ಹಣ ಬರುವುದಿಲ್ಲ ಆದ್ದರಿಂದ ಈ ಒಂದು ಲೇಖನಿಯಲ್ಲಿ ಸಂಪೂರ್ಣ ಮಾಹಿತಿಯನ್ನು ಇದರ ಬಗ್ಗೆ ತಿಳಿದುಕೊಳ್ಳೋಣ
ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳು ಹಾಗೂ ಸರಕಾರಿ ಹುದ್ದೆಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ನಮ್ಮ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು
ಅನ್ನಭಾಗ್ಯ ಯೋಜನೆ (Anna bhagya New Rules)..?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡುತ್ತು. ಆದರೆ ಅಕ್ಕಿ ಅಭಾವದಿಂದ 5 ಕೆಜಿ ಅಕ್ಕಿಗೆ ನೇರವಾಗಿ 170 ಯಂತೆ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಇಲ್ಲಿವರೆಗೂ ಈ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳು ಸುಮಾರು 13 ಕಂಚಿನ ಹಣ ಪಡೆದುಕೊಂಡಿದ್ದಾರೆ

ಹೌದು ಸ್ನೇಹಿತರೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿರುವ ಪ್ರಕಾರ ಕಳೆದ ವರ್ಷ ಜುಲೈನಿಂದ ಈ ವರ್ಷ ಜುಲೈಯದ ಅಂತ್ಯವರಿಗೂ ಸುಮಾರು 8,433.11 ಕೋಟಿ ರೂಪಾಯಿ ಹಣವನ್ನು ಪಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಹೌದು ಸ್ನೇಹಿತರೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ 170 ಹಣವನ್ನು ನಮ್ಮ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡುತ್ತಿದೆ ಹಾಗಾಗಿ ನಿಮಗೆ ಈ ಹಣ ಪ್ರತಿ ತಿಂಗಳು ಪಡಿಯಬೇಕು ಅಂದರೆ ಕಡ್ಡಾಯವಾಗಿ ಕೆಲವೊಂದು ರೂಲ್ಸ್ ಪಾಲಿಸಬೇಕು
ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಪಡೆಯಲು ಇರುವ ರೂಲ್ಸ್ ಗಳು (Anna bhagya New Rules)..?
ಪ್ರತಿ ತಿಂಗಳು ಅಕ್ಕಿ ಪಡೆಯಬೇಕು:- ಹೌದು ಸ್ನೇಹಿತರೆ ನೀವು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯ ಮೂಲಕ ರೇಷನ್ ಅಥವಾ ಅಕ್ಕಿಯನ್ನು ಪಡೆಯಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಆಯ್ಕೆ ಹಣ ಜಮಾ ಆಗುತ್ತೆ ಒಂದು ವೇಳೆ ಮೂರು ತಿಂಗಳಿಗಿಂತ ಹೆಚ್ಚು ಕಾಲ ಅಕ್ಕಿ ಪಡೆಯದೇ ಇದ್ದರೆ ಮತ್ತು ಆರು ತಿಂಗಳಿಗಿಂತ ಹೆಚ್ಚು ಕಾಲ ಅಕ್ಕಿ ಪಡೆಯದೆ ಇದ್ದರೆ ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ
ರೇಷನ್ ಕಾರ್ಡ್ E-KYC:- ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಅಣಪಡಿಯಲು ಕಡ್ಡಾಯವಾಗಿ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ kyc ಮಾಡಿಸಬೇಕು ಅಂದರೆ ಮಾತ್ರ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ ಅದರಲ್ಲಿ ಕುಟುಂಬದ ಮುಖ್ಯಸ್ಥರ ಖಾತೆಗೆ E-KYC ಮಾಡಿಸುವುದು ಕಡ್ಡಾಯವಾಗಿದೆ ಈ ಒಂದು ಕೆಲಸ ಮಾಡಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ
ಬ್ಯಾಂಕ್ ಖಾತೆ:- ಸ್ನೇಹಿತರೆ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳು ನಿಮ್ಮ ಖಾತೆಗೆ ಹಣ ಜಮಾ ಆಗಬೇಕು ಅಂದರೆ ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರಬೇಕು ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ekyc ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಇದರ ಜೊತೆಗೆ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ ಅಂದರೆ ಮಾತ್ರ ಹಣ ಬರುತ್ತೆ
ಸೆಪ್ಟೆಂಬರ್ ತಿಂಗಳ ಅಕ್ಕಿ ಹಣ ಯಾವಾಗ ಬಿಡುಗಡೆ (Anna bhagya New Rules)..?
ಹೌದು ಸ್ನೇಹಿತರೆ, ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಈಗಾಗಲೇ ಫಲಾನುಭವಿಗಳು ಜುಲೈ ಮತ್ತು ಅಗಸ್ಟ್ ತಿಂಗಳ ಹಣವನ್ನು ಪಡೆದುಕೊಂಡಿದ್ದಾರೆ ಮತ್ತು ಸೆಪ್ಟೆಂಬರ್ ತಿಂಗಳ ಹಣ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ ಈ ಬಗ್ಗೆ ನಮ್ಮ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿರುವ ಪ್ರಕಾರ ಈ ಹಣವನ್ನು ಶೀಘ್ರದಲ್ಲಿ ಅಂದರೆ ಇದೇ ಅಕ್ಟೋಬರ್ 31ರ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ