Anna bhagya money:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿಗೆ ಅಕ್ಕಿ ಹಣ ಹಾಕುತ್ತಿರುವ ವಿಷಯ ನಿಮ್ಮೆಲ್ಲರಿಗೂ ಗೊತ್ತೇ ಇದೆ ಹಾಗಾಗಿ ಈಗಾಗಲೇ ಸಾಕಷ್ಟು ಜನರಿಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಜಮಾ ಆಗಿದೆ ಮತ್ತು ಇನ್ನು ಕೆಲವರಿಗೆ ಮೂರು ತಿಂಗಳಿಂದ ಯಾವುದೇ ರೀತಿ ಅಕ್ಕಿ ಹಣ ಜಮಾ ಆಗಿಲ್ಲ ಅಂತವರಿಗೆಲ್ಲ ಭರ್ಜರಿ ಗುಡ್ ನ್ಯೂಸ್ ಹೇಳಬಹುದು ಏಕೆಂದರೆ ಈ ದಿನದಂದು ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ ಮಾಡಲಾಗುತ್ತೆ ಎಂಬ ಮಾಹಿತಿ ಬಂದಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಸ್ನೇಹಿತರೆ ನೀವು ನಮ್ಮ ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಮುಖ ಸುದ್ದಿಗಳು ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಅನ್ನಭಾಗ್ಯ ಯೋಜನೆ (Anna bhagya money)..?
ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡುತ್ತಿತ್ತು. ಆದರೆ ಅಕ್ಕಿ ಅಭಾವದಿಂದ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿ ಮಾತ್ರ ರೇಷನ್ ಕಾರ್ಡ್ ಹೊಂದಿದಂತ ಫಲಾನುಭವಿಗಳಿಗೆ ದೊರೆಯುತ್ತಿದೆ ಮತ್ತು ಇನ್ನುಳಿದ 5 ಕೆಜಿ ಅಕ್ಕಿ ಹಣವನ್ನು ನಮ್ಮ ರಾಜ್ಯ ಸರ್ಕಾರ ರೇಷನ್ ಕಾರ್ಡ್ ನಲ್ಲಿ ಹೊಂದಿರುವಂತಹ ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡುತ್ತಾ ಬಂದಿದೆ

ಹೌದು ಸ್ನೇಹಿತರೆ ಇಲ್ಲಿವರೆಗೂ ಸುಮಾರು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ 13ನೇ ಕಂತಿನ ಅಕ್ಕಿ ಹಣವನ್ನು ಪಡೆದುಕೊಂಡಿದ್ದು 5 ಕೆಜಿ ಅಕ್ಕಿಗೆ ಅಂದರೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ 170 ಹಣವನ್ನು ನಮ್ಮ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ನಲ್ಲಿ ಇರುವಂತಹ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ವರ್ಗಾವಣೆ ಮಾಡುತ್ತಾ ಬಂದಿದೆ ಮತ್ತು ಕೆಲವರಿಗೆ ಕಳೆದ ಮೂರು ತಿಂಗಳಿಂದ ಯಾವುದೇ ರೀತಿ ಅಕ್ಕಿ ಹಣ ಬಂದಿಲ್ಲ ಮತ್ತು ಇನ್ನು ಕೆಲವರಿಗೆ ಸೆಪ್ಟೆಂಬರ್ ತಿಂಗಳ ಜಮಾ ಆಗಿಲ್ಲ ಅಂತವರಿಗೆಲ್ಲ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು
ಅಕ್ಕಿ ಹಣ ಯಾವಾಗ ಜಮಾ (Anna bhagya money)..?
ಸ್ನೇಹಿತರೆ ನಮ್ಮ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ತಿಳಿಸಿರುವ ಮಾಹಿತಿಯ ಪ್ರಕಾರ ಅಕ್ಕಿ ಹಣ ಬಿಡುಗಡೆಗೆ ಕೆಲವೊಂದು ತಾಂತ್ರಿಕ ದೋಷ ಇದ್ದ ಕಾರಣ ಫಲಾನುಭವಿಗಳ ಖಾತೆಗೆ ಅಕ್ಕಿ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ . ಸೆಪ್ಟೆಂಬರ್ ತಿಂಗಳ ಅಕ್ಕಿಯನ್ನು ಹಾಗೂ ಕೆಲವರಿಗೆ ಪೆಂಡಿಂಗ್ ಇರುವಂತಹ ಮೂರು ತಿಂಗಳ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲು ಎಲ್ಲಾ ಪ್ರಕ್ರಿಯೆ ಪ್ರಾರಂಭ ಮಾಡಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ಹೌದು ಸ್ನೇಹಿತರೆ ಸೆಪ್ಟೆಂಬರ್ ತಿಂಗಳ ಅಕ್ಕಿ ಹಣವನ್ನು ಇದೇ 20ನೇ ತಾರೀಕಿನ ಮೇಲೆ ಪ್ರತಿಯೊಬ್ಬರ ಖಾತೆಗೆ ವರ್ಗಾವಣೆ ಮಾಡಲು ಪ್ರಾರಂಭ ಮಾಡುತ್ತೇವೆ ಎಂದು ಮಾಹಿತಿ ತಿಳಿದು ಬಂದಿದೆ ಮತ್ತು ಪೆಂಡಿಂಗ್ ಇರುವಂತಹ ಎಲ್ಲಾ ಅಕ್ಕಿ ಹಣ ಹಾಗೂ ಈ ಸೆಪ್ಟೆಂಬರ್ ತಿಂಗಳ ಅಕ್ಕಿ ಹಣವನ್ನು ಕೂಡ ಇವತ್ತಿನಿಂದ ಅಂದರೆ ಅಕ್ಟೋಬರ್ 20 ನೇ ತಾರೀಖಿನಿಂದ ವರ್ಗಾವಣೆ ಮಾಡಲು ಪ್ರಾರಂಭ ಮಾಡಲಾಗುತ್ತದೆ ಮತ್ತು ನವೆಂಬರ್ 10ನೇ ತಾರೀಖಿನ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಹಣ ಬಿಡುಗಡೆಯಾಗುತ್ತದೆ ಎಂದು ಮಾಹಿತಿ ಕೊಟ್ಟಿದ್ದಾರೆ
ಹಾಗಾಗಿ ನಿಮಗೆ ಸೆಪ್ಟೆಂಬರ್ ತಿಂಗಳ ಅಥವಾ ಕಳೆದ ಮೂರು ತಿಂಗಳ ಹಣ ಬಂದಿಲ್ಲ ಅಂದರೆ ನೀವು ಭಯಪಡುವ ಅವಶ್ಯಕತೆ ಇಲ್ಲ ನಿಮಗೆ ನವೆಂಬರ್ 10ನೇ ತಾರೀಖಿನ ಒಳಗಡೆ ಆಗಿ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಹಾಗೂ ಸೆಪ್ಟೆಂಬರ್ ತಿಂಗಳ ಹಣವು ಕೂಡ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತೆ ಎಂದು ಆಹಾರ ಇಲಾಖೆಯಿಂದ ಮಾಹಿತಿ ಬಂದಿದೆ ಹಾಗಾಗಿ ನಿಮಗೆ ಇವತ್ತು ಅಥವಾ ನಾಳೆ ಅಕ್ಕಿ ಹಣ ಜಮಾ ಆಗಬಹುದು